ಬಂಟ್ವಾಳಕ್ಕೆ ರಮಾನಾಥ ರೈ ಅಭ್ಯರ್ಥಿ

ಲೋಕಬಂಧು ನ್ಯೂಸ್, ಬಂಟ್ವಾಳ
ಮುಂದಿನ‌ 2028ರ ಚುನಾವಣೆಯಲ್ಲಿ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದು ಅವರನ್ನು ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ‌ ಮಾಡಿದರು.ಶನಿವಾರ ಕಂಬಳಕ್ಕಾಗಮಿಸಿದ ಅವರು ರೈ ಪರ ಬ್ಯಾಟಿಂಗ್ ಮಾಡಿದರು.
ಕಳೆದ ಬಾರಿ ರಮಾನಾಥ ರೈ ಕ್ಷೇತ್ರದಲ್ಲಿ ಐದು ಸಾವಿರ ಕೋ.ರೂ.ಗಳ ಅಭಿವೃದ್ಧಿ ಮಾಡಲಾಗಿತ್ತು. ಆದರೂ ಅವರನ್ನು ಕ್ಷೇತ್ರದ ಜನ ಸೋಲಿಸಿದರು. ಇದು ನೋವಿನ ಸಂಗತಿ.


ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ. ಪ್ರಾಮಾಣಿಕ ಮಂತ್ರಿಗಳಲ್ಲಿ ರಮಾನಾಥ ರೈ ಕೂಡಾ ಒಬ್ಬರಾಗಿದ್ದರು. ಹಾಗಾಗಿ ಅವರು ಮತ್ತೆ ಗೆಲ್ಲಬೇಕು ಎಂದರು.


ಮುಂದಿನ ಆರ್ಥಿಕ ವರ್ಷದಲ್ಲಿ‌ ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.