ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದಾಗ ಕರ್ತವ್ಯ ನಿರ್ವಹಿಸುತ್ತಿದ್ದ ತಪಾಸಣಾಧಿಕಾರಿ ಬಾಬು ಅವರ ಸಮಯಪ್ರಜ್ಞೆಯಿಂದ ರಕ್ಷಿಸಲ್ಪಟ್ಟಿರುವ ಘಟನೆ ಇನ್ನಂಜೆಯಲ್ಲಿ ಸಂಭವಿಸಿದೆ.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು, ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ನಡೆದಿದ್ದು, ಬಾಬು ಅವರು ರಕ್ಷಿಸಿದ್ದ ಯುವಕನನ್ನು ಇಂದ್ರಾಳಿಯ ಆರ್.ಪಿಎಫ್. ಕಚೇರಿ ವಶಕ್ಕೊಪ್ಪಿಸಿದರು.
ಯುವಕ ಮನೋರೋಗಿ ಎಂದು ತಿಳಿದುಬಂದಿರುವುದರಿಂದ ರೈಲ್ವೆ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಆಸ್ಪತ್ರೆ ದಾಖಲು ಪ್ರಕ್ರಿಯೆ ನಡೆಸುವಾಗ ಹೆಸರು ಸಹಾದ್ (25) ಕೊಯಿಕೊಡ್ ನಿವಾಸಿ ಎಂದಷ್ಟೆ ಹೇಳಿಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ಟಿ.ಸಿ. ಸುನಿಲ್, ಆರ್.ಪಿ.ಎಫ್ ರವಿಪ್ರಕಾಶ್, ಜೀನ ಪಿಂಟೋ ಸಹಕರಿಸಿದ್ದರು.
