ಸಮಾಜ ಸೇವಕಿ ವೀಣಾ ಶೆಟ್ಟಿ 'ವೀರ ವನಿತೆ'

ಲೋಕಬಂಧು ನ್ಯೂಸ್, ಉಡುಪಿ
ಬೆಂಗಳೂರಿನ‌ ಚಿತ್ರಸಂತೆ ಸಂಸ್ಥೆ ವತಿಯಿಂದ‌ ಶುಕ್ರವಾರ (ಮಾರ್ಚ್ 6) ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ ಅವರಿಗೆ 'ವೀರ ವನಿತೆ' ವರ್ಷದ ಶ್ರೇಷ್ಠ ಮಹಿಳೆ ಪ್ರಶಸ್ತಿ‌ ನೀಡಿ ಗೌರವಿಸಲಾಯಿತು.
ಖ್ಯಾತ ಚಲನಚಿತ್ರ ತಾರೆ ಅನುರಾಧಾ ಪ್ರಶಸ್ತಿ ಪ್ರದಾನ ಮಾಡಿದರು.


ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆ ಪ್ರಮುಖರಾದ ಅರುಣ್ ಕುಮಾರ್ ಮೊದಲಾದವರಿದ್ದರು.


ವೀಣಾ ಶೆಟ್ಟಿ ಅವರು ಸುಮಾರು ಮೂರು ದಶಕಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.