ಕಾಪು: ಇಲ್ಲಿನ ಶ್ರೀ ಹೊಸಮಾರಿಗುಡಿ ದಿವ್ಯಕ್ಷೇತ್ರದ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ 'ಮಾತೃ ವೈಭವ'ದ ಮೂರನೇ ದಿನವಾದ ಸೋಮವಾರ 'ಶ್ರೀವಿದ್ಯಾ ಶ್ರೀಚಕ್ರಯಂತ್ರಪೂಜೆ' ನಡೆಯಿತು.ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಆರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಸಹಭಾಗಿತ್ವದಲ್ಲಿ ಬೆಳಗ್ಗೆ 6.15ರಿಂದ ಗದ್ದುಗೆಯಲ್ಲಿ ಶ್ರೀಚಕ್ರಯಂತ್ರೋದ್ಧಾರ ನೆರವೇರಿಸಿ, ಬಳಿಕ ದಿವ್ಯ ಶ್ರೀಚಕ್ರಯಂತ್ರ ದರ್ಶನ, ಖಡ್ಗಮಾಲಾಮಂತ್ರ ಹೋಮ ನಡೆಸಲಾಯಿತು.ಬಳಿಕ ಶ್ರೀಚಕ್ರ ಯಂತ್ರ ಪ್ರಸನ್ನಪೂಜೆ, ಸಂಜೆ ಚತುಃಷಷ್ಟಿ ಉಪಚಾರ ಪೂಜಾ ಹಾಗೂ ಗದ್ದುಗೆಯಲ್ಲಿ ಶ್ರೀಚಕ್ರಯಂತ್ರದ ಮರುಸ್ಥಾಪನೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ಸಾವಿರಾರು ಮಂದಿ ಭಕ್ತಾದಿಗಳು ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಪಡೆಯಲು ಅವಕಾಶವಿರುವ ಗದ್ದುಗೆಯಲ್ಲಿ ಸ್ಥಾಪಿಸಿರುವ ಅಮ್ಮನ ಶ್ರೀಚಕ್ರ ದರ್ಶನ ಪಡೆದುಕೊಂಡರು.
ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ರಾಜರ್ಷಿ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಕಾರ್ಯನಿರ್ವ ಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ರವಿ ಸುಂದರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಆರ್. ಸಾಲ್ಯಾನ್, ಮನೋಹರ ಎಸ್.ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಭಗವಾನ್ ದಾಸ್ ಶೆಟ್ಟಿಗಾರ್, ಕಾರ್ಯಾಧ್ಯಕ್ಷ ಪ್ರಭಾಕರ ಎಸ್.ಪೂಜಾರಿ, ಕಾರ್ಯದರ್ಶಿ ಜಯರಾಮ ಆಚಾರ್ಯ, ದಾನಿಗಳಾದ ಸುಧಾಕರ ಹೆಗ್ಡೆ ತುಂಗಾ, ವಕೀಲ ಮಹೇಶ್ ಕೋಟ್ಯಾನ್ ಮುಂಬಯಿ ಮೊದಲಾದವರಿದ್ದರು.