ಅಗಲಿದ ಪತ್ರಕರ್ತ ಶೇಷಗಿರಿ ಭಟ್'ಗೆ ನುಡಿನಮನ

ಉಡುಪಿ: ಇತ್ತೀಚೆಗೆ ನಿಧನರಾದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಬ್ರಹ್ಮಾವರ ತಾಲೂಕು ಸಂಘದ ಉಪಾಧ್ಯಕ್ಷ ಹಾಗೂ 'ಪ್ರಜಾವಾಣಿ' ಪತ್ರಿಕೆಯ ಬ್ರಹ್ಮಾವರ ಬಿಡಿ ಸುದ್ದಿಗಾರ ಶೇಷಗಿರಿ ಭಟ್ ಅವರಿಗೆ ಪತ್ರಿಕಾ ಭವನದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಕುರ್ಯ ಮಾತನಾಡಿ, ಸೌಮ್ಯ ಸ್ವಭಾವದ ಉತ್ತಮ ಬರಹಗಾರರಾಗಿದ್ದ ಶೇಷಗಿರಿ ಭಟ್ ಪತ್ರಕರ್ತರಾಗಿ ಸಕ್ರಿಯರಾಗಿದ್ದರು.ನಮ್ಮ ಸಂಘದ ಹಿರಿಯ ಸದಸ್ಯ, ತಾಲೂಕು ಸಂಘದಲ್ಲಿ ಪದಾಧಿಕಾರಿಯಾಗಿದ್ದ ಅವರ ಅಗಲಿಕೆ ಸಂಘಕ್ಕೆ ದೊಡ್ಡ ನಷ್ಟವಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಹಿರಿಯ ಪತ್ರಕರ್ತರಾದ ಕಿರಣ್ ಮಂಜನಬೈಲು, ಬಿ.ಬಿ. ಶೆಟ್ಟಿಗಾರ್, ಶಶಿಧರ್ ಮಾಸ್ತಿಬೈಲು, ನವೀನ್ ಕುಮಾರ್, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ನುಡಿನಮನ ಸಲ್ಲಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರೂಪಿಸಿದರು.


ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಸುವರ್ಣ, ಕಾರ್ಯದರ್ಶಿಗಳಾದ ಉಮೇಶ್ ಮಾರ್ಪಳ್ಳಿ ಮತ್ತು ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಸಮಿತಿ ಸದಸ್ಯ ಅಜಿತ್ ಆರಾಡಿ, ಮೋಹನ್ ಉಡುಪ, ಪ್ರವೀಣ್ ಮುದ್ದೂರು ಮೊದಲಾದವರಿದ್ದರು.

ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು.