ಲೋಕಬಂಧು ನ್ಯೂಸ್ | ಉಡುಪಿ, ಏ.3
ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕುಂಭಾಭಿಷೇಕ ಮಹೋತ್ಸವಕ್ಕೆ ಸಿದ್ಧವಾಗಿರುವ ಇಂದ್ರಾಳಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳಕ್ಕೊಳಪಟ್ಟ ಶ್ರೀ ಮುಖ್ಯಪ್ರಾಣ ದೇವಳದಲ್ಲಿ ಏ.4ರಂದು ಶನಿವಾರ ಪೂರ್ವಾಹ್ನ 6.48ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮುಖ್ಯಪ್ರಾಣ ದೇವರ ಅಷ್ಟಬಂಧ ಸಹಿತ ಪುನಃಪ್ರತಿಷ್ಠೆ ನಡೆಯಲಿದೆ.
ಬಳಿಕ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಬೆಳಿಗ್ಗೆ 11ರಿಂದ ವಿದುಷಿ ಸವಿತಾ ಮುರಳೀಧರ ಶಿಷ್ಯವೃಂದ ನೃತ್ಯಕಲಾ ಮಂದಿರ ಮಣಿಪಾಲ ಅವರಿಂದ ನೃತ್ಯ ವೈಭವ, ಅಪರಾಹ್ನ 2ರಿಂದ ಮಧ್ಯಾಹ್ನ 2 ರಿಂದ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ, ಸಂಜೆ 4ರಿಂದ 5.30ರ ವರೆಗೆ ಮಣಿಪಾಲ ಹುಡ್ಕೊ ಕಾಲನಿ ಶ್ರೀ ಪ್ರಸನ್ನ ಗಣಪತಿ ಭಜನಾ ಮಂಡಳಿಯ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಭಜನಾಮೃತಮ್ ನಡೆಯಲಿದೆ.
ಸಂಜೆ 5.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುಷ್ಪ- ದೀಪಾಲಂಕಾರ
ದೇವಳವನ್ನು ಆಕರ್ಷಕ ವಿದ್ಯುದ್ದೀಪ ಮತ್ತು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದೆ.
.jpg)
.jpg)
.jpg)
.jpg)
.jpg)
.jpg)