ಇಂದ್ರಾಣಿ ಮುಖ್ಯಪ್ರಾಣ ದೇವಳಕ್ಕೆ ಬೃಹತ್ ದೀಪ ಸಮರ್ಪಣೆ

ಲೋಕಬಂಧು ನ್ಯೂಸ್ | ಉಡುಪಿ, ಏ.5
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಅಷ್ಟಬಂಧ ಸಹಿತ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಶ್ರೀದೇವಳದ ಪರಮ ಭಕ್ತರೂ ಜೀರ್ಣೋದ್ಧಾರ ಸಮಿತಿ ಸದಸ್ಯರೂ‌ ಆಗಿರುವ ರವಿ ಶೆಟ್ಟಿಗಾರ್ ದಂಪತಿ ಬೃಹತ್ ದೀಪವನ್ನು ಶ್ರೀದೇವರ ಸನ್ನಿಧಿಗೆ ಸಮರ್ಪಿಸಿದರು‌.
ದೇವಳದ ತಂತ್ರಿಯವರು ರವಿ ಶೆಟ್ಟಿಗಾರ್ ದಂಪತಿಗೆ ಪ್ರಸಾದ ನೀಡಿ, ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಿ ಹರಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ಮೊದಲಾದವರಿದ್ದರು.


ರವಿ ಶೆಟ್ಟಿಗಾರ್ ವಿಜಯ ಕರ್ನಾಟಕ ಪತ್ರಿಕೆಯ ಜಾಹೀರಾತು ವಿಭಾಗದ ವ್ಯವಸ್ಥಾಪಕರಾಗಿದ್ದು, ಜನಾನುರಾಗಿಯಾಗಿದ್ದಾರೆ.