ಲೋಕಬಂಧು ನ್ಯೂಸ್ | ಪಡುಬಿದ್ರಿ, ಏ.4
ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವ ದೇಗುಲದ ತಂತ್ರಿ ರಾಘವೇಂದ್ರ ಕುಕ್ಕಿಕಟ್ಟೆ ನೇತೃತ್ವದಲ್ಲಿ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಸಹಿತ ಋತ್ವಿಜರ ಪೌರೋಹಿತ್ಯದೊಂದಿಗೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶುಕ್ರವಾರ ನಡೆಯಿತು.ರಥೋತ್ಸವ ಪ್ರಯುಕ್ತ ಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ, ಪಲ್ಲಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ನೃತ್ಯ ದರ್ಶನ, ಮಧ್ಯಾಹ್ನ ಮಹಾಲಕ್ಷ್ಮೀ ರಥಾರೋಹಣ, ಭಜನಾ ಕಾರ್ಯಕ್ರಮ, ರಾತ್ರಿ ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ, ಭದ್ರಕಾಳಿ ಅಮ್ಮನವರ ದರ್ಶನ ಬಲಿ ಸೇವೆ ನೆರವೇರಿತು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದ.ಕ. ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಆಡಳಿತ ಮೊಕ್ತಸರ ಆನಂದ್ ಸಿ.ಕುಂದರ್, ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಶಾಖೆ ಗೌರವಾಧ್ಯಕ್ಷ ವೇದ ಪ್ರಕಾಶ್ ಶ್ರೀಯಾನ್ ಕದಿಕೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸುವರ್ಣ, ದ.ಕ. ಮಹಾಜನ ಸಂಘ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ್ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಶಿವಪ್ಪ ಕಾಂಚನ್, ಜೀರ್ಣೋದ್ದಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ.ಅಮೀನ್, ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್ ಉಳ್ಳಾಲ, ಮಹಿಳಾ ಮಹಾಜನ ಸಂಘ ಅಧ್ಯಕ್ಷೆ ಕವಿತಾ ಶರತ್, ನಾಲ್ಕುಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಮನೋಜ್ ಕಾಂಚನ್, ಮೊಗವೀರ ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಸುಗುಣಾ ಕರ್ಕೇರ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ ಮೊದಲಾದವರಿದ್ದರು.

