ವಳಕಾಡು ಕಾಶೀಮಠದಲ್ಲಿ ಹನುಮ ಜಯಂತಿ

ಲೋಕಬಂಧು ನ್ಯೂಸ್ | ಉಡುಪಿ, ಏ.2
ವಳಕಾಡು ಕಾಶೀಮಠದ ಶ್ರೀ ವೀರ ಮಾರುತಿ ಮಂದಿರದಲ್ಲಿ ಗುರುವಾರ ಹನುಮ ಜಯಂತಿ ಆಚರಿಸಲಾಯಿತು.
ಅರ್ಚಕರಾದ ವಿನಾಯಕ ಭಟ್ ಮತ್ತು ದೀಪಕ್ ಭಟ್ ಪೂಜಾ ವಿಧಾನ ನೆರವೇರಿಸಿದರು. ಶ್ರೀ ಮುಖ್ಯಪ್ರಾಣ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.


ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನಡೆಸಲಾಗಿತ್ತು.ಭಜನಾ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಾಡಾಗಿತ್ತು.