ಅಧಿಕ ಜ್ಯೇಷ್ಠ ಮಾಸ ಮಂಗಲಾಚರಣೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.15
ಅಧಿಕ ಜ್ಯೇಷ್ಠ ಮಾಸ (ಪುರುಷೋತ್ತಮ ಮಾಸ) ಮಂಗಲಾಚರಣೆ ಅಂಗವಾಗಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಮೂಲ ಮಂತ್ರ ಹವನ ನಡೆಯಿತು.
ದೇವಳದ ಅರ್ಚಕರಾದ ರವೀಂದ್ರ ಭಟ್, ವಿನಾಯಕ ಭಟ್, ದಯಾಘನ ಭಟ್, ವಿದ್ವಾನ್ ಹರಿಪ್ರಸಾದ್ ಶರ್ಮ, ರಮೇಶ ಭಟ್, ದೀಪಕ್ ಭಟ್ ಮತ್ತು ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾದಿಗಳನ್ನು ನಡೆಸಿಕೊಟ್ಟರು.


ದೇವಳದ ಆಡಳಿತ ಮಂಡಳಿ ಸದಸ್ಯರಾದ ಮಹೇಶ ಶೆಣೈ ದಂಪತಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು.


ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಪವಮಾನ ಅಭಿಷೇಕ ನಡೆಸಿ ವಿಶೇಷ ಅಲಂಕಾರ ಮಾಡಲಾಗಿತ್ತು.


ಯಾಗದ ಪೂರ್ಣಾಹುತಿ ಬಳಿಕ ಮಹಾಪೂಜೆ, ಭಕ್ತಾದಿಗಳಿಂದ ಸಾಮೂಹಿಕ ನಮಸ್ಕಾರ, ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನಡೆಯಿತು.


ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ ನಾಯಕ್, ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ, ಸ್ವಯಂಸೇವಕರು, ಸೇವಾದಾರರು, ಜಿಎಸ್.ಬಿ. ಯುವಕ- ಮಹಿಳಾ ಮಂಡಳಿ ಸದಸ್ಯರು  ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.