ಸದೃಢ ಶರೀರಕ್ಕೆ ಯೋಗ ಪೂರಕ

ಲೋಕಬಂಧು ನ್ಯೂಸ್ ಉಡುಪಿ, ಜೂ.21
ಎಲ್ಲಾ ಕಾರ್ಯಗಳನ್ನು ನೆರವೇರಿಸಲು ಮನುಷ್ಯನಿಗೆ ಶಾರೀರಿಕ ಸ್ವಾಸ್ಥ್ಯ ಅತ್ಯಗತ್ಯ. ಅದಕ್ಕೆ ಯೋಗಾಭ್ಯಾಸ ಪೂರಕ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಹೇಳಿದರು.ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಹರಿದ್ವಾರದ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಉಡುಪಿ ಶಾಖೆ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರ ರಾಜಾಂಗಣದಲ್ಲಿ ನಡೆದ 12ನೇ ವಿಶ್ವ ಯೋಗ ದಿನಾಚರಣೆಯ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ದತ್ತಾತ್ರೇಯರಿಂದ ಆರಂಭಗೊಂಡ ಯೋಗ, ಪತಂಜಲಿ ಮಹರ್ಷಿಗಳಿಂದ ಪ್ರಚುರಪಟ್ಟಿತು. ಯೋಗ ಕೇವಲ ಆಸನಗಳಿಗೆ ಸೀಮಿತವಾಗದೇ ಅಷ್ಟಾಂಗ ಯೋಗಗಳನ್ನೂ ಅಭ್ಯಸಿಸಬೇಕು ಎಂದವರು ಸಲಹೆ ನೀಡಿದರು.


ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿ, ಶುಭ ಹಾರೈಸಿದರು.


ಪತಂಜಲಿ ಯೋಗ ಸಂಸ್ಥೆಯ ಕೆ. ರಾಘವೇಂದ್ರ ಭಟ್ ಮತ್ತು ಸರೋಜಮ್ಮ, ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಅಜಿತ್ ಕುಮಾರ್, ರಾಜೇಶ್ ಶೆಟ್ಟಿ, ಚಂದ್ರಿಕಾ ಪೈ, ಮಮತ ಶೆಟ್ಟಿಗಾರ್ ಮೊದಲಾದವರಿದ್ದರು.


ಬಳಿಕ ವಿವಿಧ ಯೋಗಾಸನ ಭಂಗಿಗಳನ್ನು ನಡೆಸಲಾಯಿತು.