ಗೀತಾ ಮಂದಿರದಲ್ಲಿ ಚೆಯರ್ ಯೋಗ

ಲೋಕಬಂಧು ನ್ಯೂಸ್ | ಉಡುಪಿ, ಜೂ.22
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಂಕಲ್ಪ ಮತ್ತು ಮಾರ್ಗದರ್ಶನದಂತೆ ವಿಶ್ವ ಯೋಗ ದಿನ ಪ್ರಯುಕ್ತ ಭಾನುವಾರ ಗೀತಾ ಮಂದಿರದಲ್ಲಿ ಚೆಯರ್ ಯೋಗ ತರಬೇತಿ ಕಾರ್ಯಕ್ರಮ ನಡೆದಿದ್ದು, ಕುತ್ಪಾಡಿ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಉದ್ಘಾಟಿಸಿ, ಯೋಗದ ಮಹತ್ವ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ರಾಘವೇಂದ್ರ ಭಟ್, ನವದೆಹಲಿಯ ಸಿಸಿಆರ್.ಎಸ್ ತಜ್ಞ ದಿಲೀಪ್ ಕುಮಾರ್, ದಿವಾನ ನಾಗರಾಜ ಆಚಾರ್ಯ ಮೊದಲಾದವರಿದ್ದರು.
ಬಳಿಕ ವಿವಿಧ ಯೋಗಾಸನ ಪ್ರದರ್ಶನಗೊಂಡಿತು.