ಲೋಕಬಂಧು ನ್ಯೂಸ್ | ಬ್ರಹ್ಮಾವರ, ಜೂ.12
ಚಾಂತಾರು ಗ್ರಾಮದ ಹೆರಂಜೆಯಲ್ಲಿ ತೆಂಗಿನಕಾಯಿ ಬಿದ್ದು 1.5 ವರ್ಷದ ಮಗು ದಕ್ಷ್ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನೆಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಶುಕ್ರವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಮಗುವಿನ ಹೆತ್ತವರಿಗೆ ಸಾಂತ್ವನ ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕ ಯಶಪಾಲ್, ತಕ್ಷಣ ಸರ್ಕಾರಕ್ಕೆ ವರದಿ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಕಾರದ ಮೂಲಕ ಗರಿಷ್ಟ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಘಟನೆ ನಡೆದ ಸ್ಥಳಕ್ಕೆ ಸೂಕ್ತ ರಸ್ತೆ ಸಂಪರ್ಕದ ಬಗ್ಗೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು ರಸ್ತೆ ಸಂಪರ್ಕ ಜಾಗದ ಮಾಲೀಕರು ರಸ್ತೆಗೆ ಅವಕಾಶ ಕಲ್ಪಿಸಿದಲ್ಲಿ ರಸ್ತೆ ಕಾಮಗಾರಿಗೆ ಆದ್ಯತೆಯ ಮೇರೆಗೆ ಅನುದಾನ ಒದಗಿಸುವ ಭರವಸೆ ನೀಡಿದರು.
ಮೃತ ಮಗುವಿನ ತಂದೆ ಪ್ರಶಾಂತ್ ಪೂಜಾರಿ, ತಾಯಿ ಸುಚಿತ್ರ ಹಾಗೂ ಕುಟುಂಬಿಕರನ್ನು ಸಂತೈಸಿ, ವೈಯಕ್ತಿಕ ನೆಲೆಯಲ್ಲಿ ಪರಿಹಾರ ಧನ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಪಕ್ಷ ಪ್ರಮುಖರಾದ ಮಹೇಶ್ ಕೋಟ್ಯಾನ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸುಶಾಂತ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು, ಗೌತಮ್ ಅಗ್ರಹಾರ, ಮಹೇಂದ್ರ ನೀಲಾವರ, ಮಿಥುನ್ ಅಮೀನ್, ಗಿರಿಧರ್ ಚಾಂತಾರು, ಸಂತೋಷ ಜತ್ತನ್, ಉದಯ ಕಾಮತ್, ದಿನೇಶ್ ಚಾಂತಾರು, ಪ್ರೇಮಾ ಶೆಟ್ಟಿ, ಅಶೋಕ್ ಹೇರೂರು, ಹೇಮಾ ಅಶೋಕ್, ರಮ್ಯಾ ಉಪ್ಪೂರು, ಅಶೋಕ್ ಅಮೀನ್, ಶೋಭಾ ಪೂಜಾರಿ ಹಂದಾಡಿ, ಬೇಬಿ ಚಾಂತಾರು, ರೇವತಿ, ಶೈಲಜಾ ಹೇರೂರು, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೀರಾ, ಗ್ರಾಮ ಆಡಳಿತ ಅಧಿಕಾರಿ ಮೊದಲಾದವರಿದ್ದರು.
