ಲೋಕಬಂಧು ನ್ಯೂಸ್ ಉಜಿರೆ, ಜೂ.22
ರಜಾದಿನ ಹಿನ್ನೆಲೆಯಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆಯಲ್ಲಿ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆಯೂ ಅಧಿಕವಾಗಿತ್ತು.
ಹೊಟೇಲ್‌ಗಳು, ಹರಿಕೆಮಂಡೆ (ಮುಡಿ-ತಲೆಕೂದಲು ತೆಗೆಯುವಲ್ಲಿ), ವಸತಿಗೃಹಗಳು ಎಲ್ಲೆಲ್ಲೂ ಸರದಿ ಸಾಲುಗಳು ರಾರಾಜಿಸುತ್ತಿದ್ದವು!