ಲೋಕಬಂಧು ನ್ಯೂಸ್ | ಶಿರ್ವ, ಜೂ.20
ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪಲ್ಲವಿ ರಾಥೋಡ್, ಪೂಜಾ, ದೀಕ್ಷಾ ಹಾಗೂ ಅನುಶ್ವಿತ ಅವರು ವಿಭಾಗದ ಪ್ರಾಧ್ಯಾಪಕ ಡಾ.ಗಣೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಮೂತ್ರನಾಳದ ಸೋಂಕು ಪತ್ತೆಹಚ್ಚುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ತಂಡ 80 ಸಾವಿರಕ್ಕೂ ಹೆಚ್ಚು ರೋಗಿಗಳ ಮೂತ್ರದ ಪರೀಕ್ಷೆ ದಾಖಲೆಗಳನ್ನು ಒಳಗೊಂಡ ವಿಶಾಲ ದತ್ತಾಂಶ ಬಳಸಿಕೊಂಡು ಸುಧಾರಿತ ಯಂತ್ರ ಕಲಿಕೆ ವಿಧಾನದ ಮೂಲಕ ಮೂತ್ರನಾಳದ ಸೋಂಕನ್ನು ಅತ್ಯಂತ ನಿಖರವಾಗಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ಈ ವ್ಯವಸ್ಥೆಯಿಂದಾಗಿ ರೋಗಿಗಳಿಗೆ ವೈಯಕ್ತಿಕ ಆರೋಗ್ಯ ಮಾರ್ಗದರ್ಶನ, ಮುನ್ನೆಚ್ಚರಿಕೆ ಸಲಹೆ ಹಾಗೂ ಆರೋಗ್ಯ ಸಂಬಂಧಿ ಮಾಹಿತಿಯನ್ನು ಒದಗಿಸುತ್ತದೆ.
ಈ ವ್ಯವಸ್ಥೆ ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತ ಸುಲಭ ಹಾಗೂ ಪರಿಣಾಮಕಾರಿ ಎಐ ತಪಾಸಣೆ ಸೇವೆ ಒದಗಿಸುವ ಉದ್ದೇಶ ಹೊಂದಿದ್ದು ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮೂಲಕ ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಾಗೂ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ.