ಲೋಕಬಂಧು ನ್ಯೂಸ್ | ಬೆಳ್ತಂಗಡಿ, ಜೂ.17
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದ ಆರೋಪಿ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇರುವ ಬಗ್ಗೆ ಎಸ್‌ಐಟಿಗೆ ದೂರು ನೀಡಿದ್ದಾನೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಚಿನ್ನಯ್ಯ, ಪತ್ನಿ ರತ್ನಾ ಜೊತೆಯಲ್ಲಿ ಬಂದು ತನಗೆ ಮತ್ತು ತನ್ನ ಕುಟುಂಬಕ್ಕೆ ಗಿರೀಶ್ ಮಟ್ಟೆಣ್ಣವರ್ ಹಾಗೂ ಇತರರಿಂದ ಜೀವ ಬೆದರಿಕೆ ಇರುವ ಬಗ್ಗೆ ದೂರು ನೀಡಿದ್ದಾನೆ.
ಹೈಕೋರ್ಟ್‌ಗೆ ರಿಟ್ ಪಿಟಿಶನ್ ಹಾಕಿರುವ ಬಗ್ಗೆ ಅಳಿಯ ಪುರುಷೋತ್ತಮ ಹಾಗೂ ಕೆಲವರಿಗೆ ಗಿರೀಶ್ ಮಟ್ಟೆಣ್ಣವರ್ ಮತ್ತು ಅಭಿಷೇಕ್ ಎಂಬವರು ಕರೆ ಮಾಡಿ ಮಾಹಿತಿ ಕೇಳುತ್ತಿದ್ದಾರೆ. ತಮಗೆ ಅವರಿಂದ ಜೀವ ಬೆದರಿಕೆ ಇದ್ದು ಪೊಲೀಸ್ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಿನ್ನಯ್ಯ ದೂರಿನಲ್ಲಿ ತಿಳಿಸಿದ್ದಾನೆ.