ಸುಖಾನಂದ ಶೆಟ್ಟಿಗೆ ಡಾಕ್ಟರೇಟ್

ಲೋಕಬಂಧು | ನ್ಯೂಸ್ ಉಡುಪಿ, ಜೂ.19
ಕುಂದಾಪುರ ಭಂಡಾರ್ಕಾರ್ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಸುಖಾನಂದ ಶೆಟ್ಟಿ ಅವರು ಕೊಲ್ಲೂರು-ಒಂದು ಸಾಂಸ್ಕೃತಿಕ ಅಧ್ಯಯನ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯ (ಮಾಹೆ) ಡಾಕ್ಟರೇಟ್ ಪದವಿ ನೀಡಿದೆ.
ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ)ದ ಮೂಲಕ ಭಂಡಾರ್ಕಾರ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು.