ಜೆಡಿಎಸ್ ಪಕ್ಷ ಸೇರ್ಪಡೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.19
ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಸಭೆ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು.
ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಯ ಪೂಜಾರಿ ನಾಯಕತ್ವದಲ್ಲಿ ಪಕ್ಷ ಸಂಘಟನಾ ಕಾರ್ಯ ನಡೆಯಿತು.
ಪಕ್ಷದ ತತ್ವ, ಸಿದ್ಧಾಂತ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಾತ್ರದ ಬಗ್ಗೆ ವಿವರಿಸಿದರು. ಪಕ್ಷ ಕಾರ್ಯಕರ್ತರು ಜೆಡಿಎಸ್ ಸರ್ಕಾರದ ಅವಧಿಯ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕರೆ ನೀಡಿದರು.


ಈ ಸಂದರ್ಭದಲ್ಲಿ ಜ್ಯೋತಿ ಅಶೋಕ್, ಕಾಶಿನಾಥ್, ಬಸವರಾಜ್, ದೇವರಾಜ್, ಅಶೋಕ, ಹಲನ್, ಪ್ರಶಾಂತ್ ಪೂಜಾರಿ, ಮಹೇಶ್ ಪೂಜಾರಿ ಮತ್ತು ಬಲಭೀಮರಾಯ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.


ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಾಜ್ಯ ನಾಯಕರಾದ ದಕ್ಷಿತ್ ಆರ್. ಶೆಟ್ಟಿ ಮತ್ತು ಗಂಗಾಧರ ಬಿರ್ತಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ಶೆಟ್ಟಿ ಜೆಪ್ಪು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಜಯ್ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಲಿನಿ ಆರ್. ಶೆಟ್ಟಿ ಕೆಂಚನೂರು, ಕಾರ್ಯಾಧ್ಯಕ್ಷೆ ಅನಸೂಯಾ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದೇವರಾಜ ತೊಟ್ಟಂ, ರಾಮರಾವ್, ಹರಿಣಾಕ್ಷಿ, ಮೋಹಿನಿ ಎಸ್., ರಂಗ ಆರ್. ಕೋಟ್ಯಾನ್ ಇದ್ದರು.