ಕೃಷ್ಣಮಠಕ್ಕೆ ತಿರುವನಂತಪುರಂ ಮಹಾರಾಣಿ ಭೇಟಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.16
ತಿರುವನಂತಪುರಂ ರಾಜ ಮನೆತನದ ರಾಣಿ ಪದ್ಮನಾಭಾಸೇವಿನಿ ಅಶ್ವತಿ ತಿರುನಾಳ್ ಗೌರಿ ಲಕ್ಷ್ಮೀಬಾಯಿ ಅವರು ಸೋಮವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಅವರು ಶ್ರೀಕೃಷ್ಣ ಮಂತ್ರ ಲೇಖನ ಯಜ್ಞದ ಪುಸ್ತಕ ಪಡೆದುಕೊಂಡು ಸರ್ವಜ್ಞ ಪೀಠದಲ್ಲಿ ಕೃಷ್ಣ ಮಂತ್ರ ಲೇಖನ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಮೊದಲಾದವರಿದ್ದರು.