ಲೋಕಬಂಧು ನ್ಯೂಸ್ | ಕಾರ್ಕಳ, ಜೂ.22
ಕಲಾವಿದರು ಅದರಲ್ಲೂ ಯುವ ಜನತೆಗೆ ಯಕ್ಷಗಾನದ ಮಹತ್ವ ಹಾಗೂ ರಂಗಾಯಣ ನಾಟಕಗಳ ಮಹತ್ವ ತಿಳಿಸುವ ಆಶಯದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಯತ್ನದಿಂದ ಪ್ರಾರಂಭವಾಗಿದ್ದು ಅದಕ್ಕೆ ಸಂಬಂಧಪಟ್ಟ ಕೆಲಸಗಳು ನಿರಂತರವಾಗಿ ನಡೆಯುತ್ತಿತ್ತು.
ಯಕ್ಷ ರಂಗಾಯಣದ ಹೆಸರನ್ನು ಹೆಸರು ಕರಾವಳಿ ರಂಗಾಯಣ ಎಂಬುದಾಗಿ ಬದಲಿಸುವ ದಿಢೀರ್ ಮತ್ತು ದುರುದ್ದೇಶಪೂರಿತ ಸರ್ಕಾರದ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆ, ರಂಗಭೂಮಿ ಹಾಗೂ ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಅವಮಾನ.
ಆದ್ದರಿಂದ ಯಕ್ಷ ರಂಗಾಯಣದ ಅಭಿಮಾನಿಯಾಗಿ ಸರಕಾರದ ಈ ನಿರ್ಧಾರವನ್ನು ವಿರೋಧಿಸುವುದಾಗಿ ರಮಿತಾ ತಿಳಿಸಿದ್ದಾರೆ.
