ಲೋಕಬಂಧು ನ್ಯೂಸ್ | ಮಣಿಪಾಲ, ಜೂ.22
ಇಲ್ಲಿಗೆ ಸಮೀಪದ ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಭಾನುವಾರ ವಿಶ್ವ ಯೋಗ ದಿನಾಚರಣೆ ಮಾಡಲಾಯಿತು.
ಬೆಳಿಗ್ಗೆ ಸೌಖ್ಯವನ ಎದುರಿನ ವಿಶಾಲವಾದ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 200ಕ್ಕಿಂತಲೂ ಹೆಚ್ಚು ಸಾಧಕರು, ಸಿಬ್ಬಂದಿಗಳು ಹಾಗೂ ಆಸುಪಾಸಿನ ಸಾರ್ವಜನಿಕರು ಜೊತೆಯಾಗಿ ಯೋಗಾಭ್ಯಾಸ ನಡೆಸಿದರು.
ನಂತರ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ, ಪ್ರಸ್ತುತ ದಿನಗಳಲ್ಲಿ ಯೋಗ ವಿಶ್ವಮಾನ್ಯವಾಗಿದೆ. ಅಲ್ಲದೇ ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಇಂದಿನ ಒತ್ತಡದ ದಿನಗಳಲ್ಲಿ ಪ್ರತಿಯೊಬ್ಬರೂ ದಿನದ ಒಂದು ಘಂಟೆಯಾದರೂ ಯೋಗಾಭ್ಯಾಸ ನಡೆಸಿ ತಮ್ಮ ಆರೋಗ್ಯ
ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧಾರವಾಡ ಪೊಲೀಸ್ ವೃತ್ತ ನಿರೀಕ್ಷಕ ಹಾಗೂ ಆಸ್ಪತ್ರೆಯ ಸಾಧಕ ಮಹಮ್ಮದ್ ರಫೀಕ್ ಕಾರ್ಯಕ್ರಮ ಉದ್ಘಾಟಿಸಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿದ್ದ ಪರ್ಕಳ ಪಾಟೀಲ್ ಕ್ಲೋತ್ ಸ್ಟೋರ್ ಮಾಲಕ ಗಣೇಶ್ ಪಾಟೀಲ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಹರಿನಾರಾಯಣ ಭಂಡಿ ಪೆರ್ಡೂರು ಅವರನ್ನು ಸೌಖ್ಯ ಯೋಗ ಭಾಗ್ಯ ಬಿರುದಿನೊಂದಿಗೆ ಗೌರವಿಸಲಾಯಿತು.
ಯೋಗ ವಿಭಾಗದ ಮುಖ್ಯಸ್ಥ ಡಾ. ಶೋಭಿತ್ ಶೆಟ್ಟಿ ಪ್ರಸ್ತಾವನೆಗೈದರು. ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಆಡಳಿತ ವಿಭಾಗದ ನಾಗರಾಜ್ ವಂದಿಸಿದರು.
ಕಾರ್ಯಕ್ರಮದ ಬಳಿಕ ಕಿರಿಯ ವೈದ್ಯರಿಂದ ಯೋಗ ಪ್ರಾತ್ಯಕ್ಷತೆ ನಡೆಯಿತು.
.jpg)
.jpg)