ಉದ್ಯಾವರದಲ್ಲಿ ಯೋಗ ದಿನಾಚರಣೆ

ಲೋಕಬಂಧು ನ್ಯೂಸ್ ಕಾಪು, ಜೂ.21
ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಭಾನುವಾರ ಯೋಗಾಸನ ಪ್ರದರ್ಶನ ನಡೆಯಿತು.ಶಾಲಾ ಸಹಶಿಕ್ಷಕಿ ಮಂಜುಳಾ ಅವರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಜೊತೆಯಾಗಿ ವಿವಿಧ ಯೋಗಾಸನ ಪ್ರದರ್ಶಿಸಿದರು.