ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿ

ಲೋಕಬಂಧು ನ್ಯೂಸ್ ಉಡುಪಿ, ಜೂ.21
ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿ ಎಂದು ರಾಜಯೋಗಿ ಅವಿನಾಶ್ ವಂಕರ್ ಹೇಳಿದರು.ಕರ್ನಾಟಕ ರಾಜ್ಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಹಾಗೂ ಮಣಿಪಾಲ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬ್ರಹ್ಮಗಿರಿ ಐಎಂಎ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಶ್ರೀ ಪಾಲಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಯೋಗದ ಮಹತ್ವ ವಿವರಿಸಿದರು.


ಈ ಸಂದರ್ಭದಲ್ಲಿ ರಾಜಯೋಗಿ ಅವಿನಾಶ್ ವಂಕರ್ ಅವರನ್ನು ಗೌರವಿಸಲಾಯಿತು.


ಐಎಂಎ ಉಡುಪಿ- ಕರಾವಳಿ ಕಾರ್ಯದರ್ಶಿ ಡಾ.ಮಾನಸ್, ಕೋಶಾಧಿಕಾರಿ ಡಾ.ಸನತ್ ರಾವ್, ಮಣಿಪಾಲ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಇಂದಿರಾ ಶ್ಯಾನುಭೋಗ್, ಉಪಸ್ಥಿತರಿದ್ದರು.


ಯೋಗಪಟು ಡಾ. ಅನ್ನಪೂರ್ಣ ಹಾಗೂ ಶಿಷ್ಯೆಯರಿಂದ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು. ಐಎಂಎ ಮಹಿಳಾ ವಿಭಾಗದವರಿಂದ ಯೋಗ ನೃತ್ಯ ನಡೆಯಿತು.


ಐಎಂಎನ ಡಾ.ಶರತ್ ಪ್ರಾರ್ಥಿಸಿದರು. ಮಣಿಪಾಲ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಸ್ವಾಗತಿಸಿದರು. ಕೋಶಾಧಿಕಾರಿ ಡಾ.ಅಂಜಲಿ ಮುಂಡ್ಕೂರು ಮತ್ತು ಡಾ. ರಂಜಿತಾ ನಾಯಕ್  ನಿರೂಪಿಸಿದರು. ಐಎoಎ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಕಾಮತ್ ವಂದಿಸಿದರು.