ದೈಹಿಕ ಮಾನಸಿಕ ಸದೃಢತೆಗೆ ಯೋಗ ಪೂರಕ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.22
ಮಾನಸಿಕ ಹಾಗೂ ಶಾರೀರಿಕ ಸದೃಢತೆ ಕಾಪಾಡಲು ಯೋಗ ಅತೀ ಅಗತ್ಯ. ವಿದ್ಯಾರ್ಥಿಗಳು ಯೋಗಾಭ್ಯಾಸದೊಂದಿಗೆ ಆರೋಗ್ಯಕರ ಆಹಾರ ಬಳಸುವುದರ ಕಡೆಯೂ ಗಮನಹರಿಸಬೇಕು ಎಂದು ಜ್ಞಾನಸುಧಾ ಪೂರ್ವ ವಿದ್ಯಾರ್ಥಿನಿ ಹಾಗೂ ಮಣಿಪಾಲ ಮಾಹೆ ಯೋಗ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಆತ್ಮಿಕ ಶೆಟ್ಟಿ ಸಲಹೆ ನೀಡಿದರು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಮಣಿಪಾಲ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾನಗರದಲ್ಲಿ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯೋಗದ ಉಪಯೋಗ ತಿಳಿಸಿದ ಅವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿದರು.


ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು  ಪ್ರಾಂಶುಪಾಲ ಗಣೇಶ್ ಶೆಟ್ಟಿ, ಜೆ.ಇ.ಇ/ ನೀಟ್ ಫೌಂಡೇಶನ್ ಸ್ಟೂಡೆಂಟ್ ಕೋರ್ಡಿನೇಟರ್ ಶಮಿತ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಕುಮಾರ್ ಇದ್ದರು. ಶಿಕ್ಷಕಿ ದೀಪ್ತಿ ನಿರೂಪಿಸಿ, ವಂದಿಸಿದರು.