ಲೋಕಬಂಧು ನ್ಯೂಸ್ | ಹಿರಿಯಡಕ, ಜೂ.22
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಉಡುಪಿ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಬಂಧಿಗಳಿಗೆ ಉಡುಪಿ ಆಯುಷ್ ಇಲಾಖೆ ಸಹಯೋಗದೊಂದಿಗೆ ಯೋಗ ತರಬೇತುದಾರ ಪ್ರಕಾಶ ನಾಯ್ಕ್ ಅವರಿಂದ ಯೋಗಾಭ್ಯಾಸ ನಡೆಯಿತು.
ಕಾರಾಗೃಹದ ಅಧೀಕ್ಷಕ ವಿಜಯಕುಮಾರ್ ಚವ್ಹಾಣ್, ಕಾರ್ಯನಿರ್ವಾಹಕ ಜೈಲರ್ ಡಿ.ಆರ್. ಕೋಣಿ, ಸಹಾಯಕ ಜೈಲರ್ ಆರ್.ಎಸ್.ಲಮಾಣಿ ಮೊದಲಾದವರಿದ್ದರು.
