ಲೋಕಬಂಧು ನ್ಯೂಸ್ | ಉಡುಪಿ, ಜು.9
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಒಂದು ಸಾವಿರ ಗೌರವ ಶಿಕ್ಷಕರನ್ನು ನೇಮಿಸಿದ್ದು, ಉಡುಪಿ ಜಿಲ್ಲೆಗೆ 100 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದೆ.
ನಗರದ ಬ್ರಹ್ಮಗಿರಿಯಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಸೌಧದಲ್ಲಿ ನಿಯೋಜಿತ ಶಿಕ್ಷಕರಿಗೆ ಸಂದರ್ಶನ ಏರ್ಪಡಿಸಿದ್ದು, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಸಮುದಾಯಾಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಕಚೇರಿಯ ಸಮುದಾಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಶೇಖರ್ ಜ್ಞಾನದೀಪ ಶಿಕ್ಷಕರ ಕರ್ತವ್ಯದ ಕುರಿತು ಮಾಹಿತಿ ನೀಡಿದರು.
ಎಂ.ಐ.ಎಸ್. ಯೋಜನಾಧಿಕಾರಿ ಸ್ವಪ್ನ ಪ್ರಕಾಶ್, ಯೋಜನಾಧಿಕಾರಿ ಸುರೇಂದ್ರ ನಾಯ್ಕ, ಬಾಲಕೃಷ್ಣ ಹಿರಿಂಜ, ಉಮೇಶ್, ಸುಧೀರ್, ರಮೇಶ್ ಪಿ.ಕೆ. ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಅನಿತಾ ಶೆಟ್ಟಿ ಉಪಸ್ಥಿತರಿದ್ದು ಸಂದರ್ಶನ ಪೃಕ್ರಿಯೆ ನಡೆಸಿದರು.
ಜಿಲ್ಲಾ ಕಚೇರಿ ಪ್ರಬಂಧಕಿ ಜ್ಯೋತಿ ಸ್ವಾಗತಿಸಿ, ಚೈತ್ರ ನಿರೂಪಿಸಿದರು. ನಿತೇಶ್ ವಂದಿಸಿದರು. ಅರ್ಪಿತಾ, ಸರೋಜಿನಿ, ಕೀರ್ತೀಕ್, ಯಶೋದಾ ಮತ್ತು ಕಿರಣ್ ಸಹಕರಿಸಿದರು.
