ಲೋಕಬಂಧು ನ್ಯೂಸ್, ಕಾರ್ಕಳ, ಜು.9
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನಾ ದಿನವನ್ನು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ವಿಕಾಸ ಸೇವಾ ಸಂಸ್ಥೆ ಸಹಯೋಗದೊಂದಿಗೆ ವಿಕಾಸ ಸೌಧದಲ್ಲಿ ಬೃಹತ್ ವಿಕಾಸ್ ಉದ್ಯೋಗ ಸಂದರ್ಶನ ಉದ್ಯೋಗ ಸೇತು ಗುರುವಾರ ನಡೆಯಿತು. ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಭಾಗಗಳಿಂದ ಆಯ್ದ ಸುಮಾರು 25 ಕಂಪನಿಗಳಿಂದ ನೇರ ಸಂದರ್ಶನ ಆಯೋಜಿಸಲಾಗಿತ್ತು.
ಪ್ರಮುಖವಾಗಿ Foxconn, Chithara group, Sri Bhramari Creations Private Limited, Jaihind Tubes Private Limited, Manipal Technologies, Cogent, Praj-Genx, Bell-O-Seal, Toyota, Advith JCB, Reliance, Indo MDM, My TVS, ZF Rani, Meru info solutions, Vinayaka Engineering, Precision Tsugami, Spectrum Solutions, Prasanna Technologies, DQ System, Winman, Teleperformance, EcoPeak, Innova – System, M11 Energy Transition Private Limited ಮೊದಲಾದ ಕಂಪನಿಗಳು ಭಾಗವಹಿಸಿದ್ದವು.
1,600ಕ್ಕೂ ಅಧಿಕ ಉದ್ಯೋಗಾಬ್ಷಗಳು ಭಾಗಿಯಾಗಿದ್ದು, 360ಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಭಿಸಿದ್ದು, ಅವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. ಇನ್ನುಳಿದಂತೆ 240ಕ್ಕೂ ಅಧಿಕ ಉದ್ಯೋಗಾರ್ಥಿಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತೆ ಕಂಪೆನಿ ಅವರನ್ನು ಕರೆಸಿ ಸಂದರ್ಶನ ನಡೆಸಲಿದೆ.
ವಿಕಾಸ ಶಾಸಕರ ಕಛೇರಿ ಹಾಗೂ ರಾಮ ಮಂದಿರ ಎರಡೂ ಕಡೆಗಳಲ್ಲಿ ಏಕಕಾಲಕ್ಕೆ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಸಂದರ್ಶನ ನಡೆದಿದ್ದು, ಉದ್ಯೋಗಾರ್ಥಿಗಳಿಗೆ ಸುವ್ಯವಸ್ಥಿತ ಸಭಾಂಗಣ, ಆಸನ, ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೊದಲೇ ನೋಂದಣಿ ಮಾಡಿಕೊಂಡ ಉದ್ಯೋಗಾರ್ಥಿಗಳಿಗೆ ಸೂಕ್ತ ಮಾಹಿತಿ ಜೊತೆಗೆ ಎರಡು ದಿನಗಳ ಕಾಲ ಸಂದರ್ಶನ ಎದುರಿಸಲು ತರಬೇತಿ ನೀಡಲಾಗಿತ್ತು.
ಶಾಸಕ ಸುನಿಲ್ ಕುಮಾರ್ ನೇತೃತ್ವದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಲಭಿಸಿದ್ದು, ಸರ್ವರ ಪ್ರಶಂಸೆಗೆ ಪಾತ್ರವಾಯಿತು.
