ಅಪ್ಪಿ ಪರ್ಕಳ ನಿಧನ

ಲೋಕಬಂಧು ನ್ಯೂಸ್ | ಮಣಿಪಾಲ, ಜು.11
ಪರ್ಕಳ ನಿವಾಸಿ ಅಪ್ಪಿ ಶೆಟ್ಟಿಗಾರ್ (97) ವಯೋಸಹಜ ಅನಾರೋಗ್ಯದಿಂದ ಕಾಯಿಲೆಯಿಂದ ಕೊಳಲಗಿರಿ ಮಾಹೆ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ನಲ್ಲಿ ಶುಕ್ರವಾರ ನಿಧನರಾದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 35 ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಅಂದಿನ ದಿನಗಳಲ್ಲಿ ನೇಕಾರಿಕೆ, ಅವಲಕ್ಕಿ ಕುಟ್ಟುವಿಕೆ, ಕೃಷಿ ಕಾರ್ಯಗಳಲ್ಲಿ ತೊಡಗಿದ್ದು, ಪರೋಪಕಾರಿಯಾಗಿ, ಜನಾನುರಾಗಿಯಾಗಿದ್ದರು.


ಅವರ ಇಚ್ಛೆಯಂತೆ ಕೆ.ಎಂ.ಸಿ. ಮಣಿಪಾಲದ ವಿದ್ಯಾರ್ಥಿ ಗಳ ಅಧ್ಯಯನದ ಸಲುವಾಗಿ ದೇಹ ದಾನ ಮಾಡಲಾಯಿತು.


ಅವರಿಗೆ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.