ದ.ಕ. ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಲಿ ಶಿಹಾಬ್ ತಂಙಳ್

ಲೋಕಬಂಧು ನ್ಯೂಸ್ | ಮಂಗಳೂರು, ಜು.12
ದಕ್ಷಿಣ ಕನ್ನಡ ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಲಿ ಶಿಹಾಬ್ ತಂಙಳ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇತ್ತೀಚೆಗೆ ನಿಧನರಾಗಿದ್ದು, ಖಾಝಿ ಸ್ಥಾನ ತೆರವಾಗಿತ್ತು. ಜು.11ರಂದು ಸಭೆ ನಡೆಸಿ ನೂತನ ಖಾಝಿಯಾಗಿ ಅಧಿಕೃತ ಘೋಷಣೆ ಮಾಡಲಾಗಿದೆ.


ಕೇರಳದ ಹಿರಿಯ ಧಾರ್ಮಿಕ ವಿದ್ವಾಂಸರಾಗಿರುವ 62ರ ಹರೆಯದ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಲಿ ಶಿಹಾಬ್ ತಂಙಳ್ ಅವರು ಕೇರಳದ ಪ್ರಭಾವಿ ಮತ್ತು ಗೌರವಾನ್ವಿತ ಇಸ್ಲಾಮಿ ವಿದ್ವಾಂಸರಾಗಿದ್ದಾರೆ. ಧಾರ್ಮಿಕ ಮತ್ತು ರಾಜಕೀಯ ನಾಯಕರಿರುವ ಪಾಣಕ್ಕಾಡ್ ಕುಟುಂಬದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಕಲ್ಲಿಕೋಟೆ ಮುಖ್ಯ ಖಾಝಿಯಾಗಿ ಕಳೆದ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.