ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗೆ ಕೇಂದ್ರ ಸಮ್ಮತಿ

ಲೋಕಬಂಧು ನ್ಯೂಸ್ | ಉಡುಪಿ, ಜು.9
ಹವಾಮಾನ ಆಧರಿತ ಬೆಳೆ ವಿಮೆ ಯೋಜನೆ ನೋಂದಣಿ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಸಂಸದ‌ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ಕುರಿತ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಯನ್ನು ಕೇಂದ್ರ ಪುರಸ್ಕರಿಸಿದ್ದು, ಜು.15ರ ವರೆಗೆ ವಿಸ್ತರಿಸಿದೆ.


ವಿಮಾ ಯೋಜನೆಗೆ ಬಾಕಿ ಉಳಿದಿರುವ ರೈತರು ವಿಮಾ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡುವಂತೆ ಸಂಸದ ಕೋಟ ತಿಳಿಸಿದ್ದಾರೆ.


ಕಳೆದ ಬಾರಿ ಸಂತ್ರಸ್ತ ರೈತರಿಗೆ ವಿಮಾ ಸೌಲಭ್ಯ ಸಿಗುವಲ್ಲಿ ಮಳೆ ಮಾಪನವೂ ಸೇರಿದಂತೆ ಕೆಲವು ಕಾರಣಗಳಿಂದ ಗೊಂದಲವಾಗಿತ್ತು, ಈ ಬಾರಿ ಅಂಥ ಗೊಂದಲವಾಗದಂತೆ ಜಾಗ್ರತೆ ವಹಿಸಲು ಸಂಸದರು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.