ಲೋಕಬಂಧು ನ್ಯೂಸ್ | ಉಡುಪಿ,ಜು.9
ನಕಲಿ ಜನನ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಮಕ್ಕಳಿಲ್ಲದ ದಂಪತಿಗೆ ಅಕ್ರಮವಾಗಿ ಶಿಶು ಮಾರಾಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಇಲ್ಲಿನ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ.ಕೆ. ಸುರೇಂದ್ರ ಕಾಮತ್ ಅವರಿಗೆ ಜಾಮೀನು ಮಂಜೂರಾಗಿದೆ.
ಅನಾರೋಗ್ಯದ ಕಾರಣ ಉಲ್ಲೇಖಿಸಿ ಡಾ.ಕಾಮತ್ ಉಡುಪಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ, ನಿಗದಿತ ಷರತ್ತುಗಳೊಂದಿಗೆ ಡಾ.ಕೆ.ಸುರೇಂದ್ರ ಕಾಮತ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಡಾ.ಕಾಮತ್ ವಿರುದ್ಧ ನಕಲಿ ಜನನ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಮಕ್ಕಳಿಲ್ಲದ ದಂಪತಿಗೆ ಅಕ್ರಮವಾಗಿ ಶಿಶುಗಳನ್ನು ಮಾರಾಟ ಮಾಡಿರುವ ಗಂಭೀರ ಆರೋಪದಡಿ ಪ್ರಕರಣ ದಾಖಲಾಗಿತ್ತು.
