ಲೋಕಬಂಧು ನ್ಯೂಸ್ | ಕಾರ್ಕಳ, ಜು.12
ಸಮಾಜ ಸೇವೆಯೇ ಶ್ರೇಷ್ಠ ಸೇವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಮಾನವೀಯತೆ ಮತ್ತು ರಾಷ್ಟ್ರಪ್ರೇಮ ಬೆಳೆಸುವ ಅತ್ಯುತ್ತಮ ವೇದಿಕೆ ರಾಷ್ಟ್ರೀಯ ಸೇವಾ ಯೋಜನೆ ಎಂದು ಉದ್ಯಮಿ ವಿಜಯ್ ಶೆಟ್ಟಿ ಹೇಳಿದರು.
ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2026-27ನೇ ಸಾಲಿನ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮನೋವೈದ್ಯ ಡಾ.ಪ್ರಸನ್ನ ಹೆಗ್ಡೆ, ನನಗಾಗಿ ಅಲ್ಲ ನಿನಗಾಗಿ ಎಂಬ ಎನ್ಎಸ್ಎಸ್ ಧ್ಯೇಯವಾಕ್ಯವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸೇವೆಗೆ ಅರ್ಥ ಬರುತ್ತದೆ. ಸೇವೆ ಎಂಬುದು ಪ್ರಶಸ್ತಿಗಾಗಿ ಮಾಡುವ ಕೆಲಸವಲ್ಲ. ಸಮಾಜಕ್ಕೆ ನೀಡುವ ನಿಸ್ವಾರ್ಥ ಸೇವೆ ರಾಷ್ಟ್ರದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆ ಸಮಾಜದ ಆಶಾಕಿರಣ ಎಂದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮುಖ್ಯ ನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಾಂಶುಪಾಲ ಸಾಹಿತ್ಯ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಸುಮಿತ್ರ, ಲೆ|ಮಂಜುನಾಥ್ ಮುದೂರು, ಎನ್ಎಸ್ಎಸ್ ಸಂಯೋಜನಾಧಿಕಾರಿ ಪ್ರಸಾದ್ ಆಚಾರ್ಯ, ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಇದ್ದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಸಂಯೋಜನಾಧಿಕಾರಿ ಶೈಲೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ತಿಕ್ ನಿರೂಪಿಸಿದರು. ವಿದ್ಯಾರ್ಥಿ ನಯಕರಾದ ಧನುಶ್ ಚೌಟ ಪ್ರಮಾಣವಚನ ಬೋಧಿಸಿ, ಅನ್ವಿತಾ ವಂದಿಸಿದರು.
.jpg)
.jpg)