ಲೋಕಬಂಧು ನ್ಯೂಸ್ | ಶೃಂಗೇರಿ, ಜು.10
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ನರಸಿಂಹವನದಲ್ಲಿ ನೂತನವಾಗಿ ನಿರ್ಮಿಸಿದ ಆಪ್ತಕಾರ್ಯದರ್ಶಿಗಳ ಕಾರ್ಯಾಲಯ ವಿದ್ಯಾತೀರ್ಥ ಕೃಪಾವನ್ನು ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಜು.9ರಂದು ಗುರುವಾರ ವೇದಘೋಷದೊಂದಿಗೆ ಜ್ಯೋತಿ ಪ್ರಜ್ವಲನಗೈದು ಸಾಂಪ್ರದಾಯಿಕವಾಗಿ ಉದ್ಘಾಟಿಸಿ, ಶುಭ ಹಾರೈಸಿದರು.
ಶೃಂಗೇರಿ ಶ್ರೀಮಠದ ಸಿಇಓ ಹಾಗೂ ಆಡಳಿತಾಧಿಕಾರಿ 'ಗುರು ಸೇವಾನಿರತ' ಪಿ.ಎ.ಮುರಳಿ ಹಾಗೂ ಆಪ್ತ ಕಾರ್ಯದರ್ಶಿ ವೇದಬ್ರಹ್ಮಶ್ರೀ ಟಿ.ದಕ್ಷಿಣಾಮೂರ್ತಿ ಅವರು ಜಗದ್ಗುರು ಮಹಾಸ್ವಾಮಿಗಳಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಆಯೋಜಿಸಲಾದ ಸಹಸ್ರ ಮೋದಕ ಗಣಪತಿ ಹೋಮದ ಪೂರ್ಣಾಹುತಿಯನ್ನು ಜಗದ್ಗುರು ಶ್ರೀ ಮಹಾಸನ್ನಿಧಾನಂಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ಆಪ್ತಕಾರ್ಯದರ್ಶಿಗಳ ಕಾರ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಸೇವಾ ಕೌಂಟರ್‌ಗಳು ಸೇರಿದಂತೆ ಕಾರ್ಯಾಲಯದ ನಿರ್ಮಿಸಲಾದ ವಿಭಾಗಗಳನ್ನು ಪರಿಶೀಲಿಸಿದರು.
.jpg)
.jpg)
.jpg)
.jpg)
.jpg)
.jpg)