ಲೋಕಬಂಧು ನ್ಯೂಸ್ | ಪಡುಬಿದ್ರಿ, ಜು.12
ಹಠಯೋಗ ಸಮಿತಿ ಪಡುಬಿದ್ರಿ ನೇತೃತ್ವದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಬಂಟರ ಸಂಘ ಪಡುಬಿದ್ರಿ ಮತ್ತು ಎಂ-11ಎನರ್ಜಿ ಟ್ರಾನ್ಶನ್ ಸಹಯೋಗದೊಂದಿಗೆ ಬಂಟರ ಭವನದ ತೆರೆದ ಸಭಾಭವನದಲ್ಲಿ ವಿಶ್ವ ಯೋಗ ದಿನಾಚರಣೆ ಮಾಡಲಾಯಿತು.
ಸುತ್ತಮುತ್ತಲಿನ ಸುಮಾರು 150ಕ್ಕೂಮಿಕ್ಕಿ ಯೋಗಾಸನಾಸಕ್ತರು ಭಾಗವಹಿಸಿದ್ದರು.
ಪ್ರಧಾನ ಯೋಗ ತರಬೇತುದಾರ ಡಾ.ಮನೋಜ್ ಕುಮಾರ್ ಶೆಟ್ಟಿ ಮತ್ತು ಮಕರಂದ ಸಾಲ್ಯಾನ್ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಮತ್ತು ಇನ್ನರ್ ವ್ಹೀಲ್ ಅಧ್ಯಕ್ಷೆ ಸ್ನೇಹಾ ಪ್ರವೀಣ್ ಉದ್ಘಾಟಿಸಿದರು.
ಎಂ-11ಎನರ್ಜಿ ಟ್ರಾನ್ಶನ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಅನಿಲ್ ಪಾಲನ್, ಉಡುಪಿ ಜಿಲ್ಲಾ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಡಾ. ಎನ್.ಟಿ.ಅಂಚನ್, ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಮ್ಯಾಕ್ಸಿಮ್ ಡಿ'ಸೋಜ, ಪೂರ್ವಾಧ್ಯಕ್ಷ ಸಂಪತ್ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಪಡುಬಿದ್ರಿ ಹಠಯೋಗ ಶಿಕ್ಷಣ ಸಮಿತಿ ಸದಸ್ಯರಾದ ಜಗದೀಶ್ ಆಚಾರ್, ಸಂತೋಷ್ ಆಚಾರ್, ಜ್ಯೋತಿ ಪಿಂಟೊ, ಗೀತಾ ರಾವ್, ಸುಖೇಶ್, ಶಾಲೆಟ್ ಫುರ್ಟಾಡೊ, ಸತೀಶ್ ಆಚಾರ್ ಮುಖ್ಯ ಅತಿಥಿಗಳಾಗಿದ್ದರು.
ಖ್ಯಾತ ಆಯುರ್ವೇದ ವೈದ್ಯ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಡಾ.ಎನ್.ಟಿ.ಅಂಚನ್ ಯೋಗದ ಮಹತ್ವದ ಬಗ್ಗೆ ವಿವರಿಸಿ ಬಿಪಿ, ಶುಗರ್, ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳನ್ನು ಯೋಗದಿಂದ ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು.
ಜಯ ಶೆಟ್ಟಿ ವಂದಿಸಿದರು.
