ಲೋಕಬಂಧು ನ್ಯೂಸ್ ಕಾರ್ಕಳ, ಆ.4
ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು, ಜುಗಾರಿ ನಿರತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರನ್ನು ಸುಜಿತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಯಶೋಧರ (ಅಣ್ಣು), ನೂರ್ ಮಹಮ್ಮದ್, ರವಿ ಶೆಟ್ಟಿ ಮತ್ತು ಸತೀಶ್ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ದಾಳಿ ವೇಳೆ ಜುಗಾರಿಗೆ ಬಳಸಲಾಗಿದ್ದ 16,350 ರೂ. ನಗದು, ಇಸ್ಪೀಟು ಎಲೆಗಳು, 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಅಂದಾಜು ಮೌಲ್ಯ 17 ಸಾವಿರ ರೂ ಹಾಗೂ ಕುರ್ಚಿ ಸೇರಿದಂತೆ ಜುಗಾರಿ ನಡೆಸಲು ಬಳಸಿದ ಸುಮಾರು 10,500 ರೂ. ಮೌಲ್ಯದ ಪೀಠೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.