ಮೊಬೈಲ್ ಗೀಳಿನಿಂದ ಹೊರಬನ್ನಿ

ಲೋಕಬಂಧು ನ್ಯೂಸ್ ಕಾರ್ಕಳ, ಆ.2
ಇಂದು ಜನರಲ್ಲಿ ಮೊಬೈಲ್ ವೀಕ್ಷಣೆಯ ಮಟ್ಟ ಹೆಚ್ಚಾಗಿ ಅನಾರೋಗ್ಯಕರ ಮನಸ್ಥಿತಿ ಉಂಟಾಗಿದೆ. ಅದರಿಂದ ಹೊರಬರಲು ವಿವಿಧ ಹವ್ಯಾಸಗಳು, ವ್ಯಾಯಾಮ, ಸಂಘ ಜೀವನದ ಜೊತೆಗೆ ಸಕಾರಾತ್ಮಕ ಜೀವನ ಶೈಲಿ ನಮ್ಮಲ್ಲಿದ್ದರೆ ಆರೋಗ್ಯಕರ ಬದುಕು ಸಾಧ್ಯಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಹೇಳಿದರು.
ಇಲ್ಲಿನ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ 'ಡೂಮ್ ಸ್ಕ್ರೋಲಿಂಗ್ ಟು ಡೀಪ್ ಫೋಕಸ್' ವಿಷಯ ಕುರಿತ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.


ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ, ಎನ್.ಸಿ.ಸಿ ಅಧಿಕಾರಿ ಲೆlಮಂಜುನಾಥ್ ಮುದೂರು, ಎನ್.ಎಸ್ಎಸ್ ಉಪಸಂಯೋಜನಾಧಿಕಾರಿ ಪ್ರಸಾದ್ ಆಚಾರ್ಯ, ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಹಾಗೂ ಎನ್ಎಸ್.ಎಸ್ ನಾಯಕಿ ಅನ್ವಿತಾ ಶೆಟ್ಟಿ ಇದ್ದರು.


ಎನ್ಎಸ್ಎಸ್ ನಾಯಕ ಧನುಷ್ ಚೌಟ ಕಾರ್ಯಕ್ರಮ ನಿರೂಪಿಸಿ, ಶ್ರೀಕರ ಭಟ್ ಸ್ವಾಗತಿಸಿದರು. ಅದ್ವೈತ್ ಸಾಲ್ಯಾನ್ ಪರಿಚಯಿಸಿ, ಆಶ್ಲೇಷ್ ಪ್ರಭು ವಂದಿಸಿದರು.