ವಿದುಷಿ ಉಷಾ ಹೆಬ್ಬಾರ್'ಗೆ‌ ಗುರುವಂದನೆ

ಲೋಕಬಂಧು ನ್ಯೂಸ್ | ಉಡುಪಿ, ಆ.2
ಪುತ್ತಿಗೆ ಮಠಾಧೀಶ ವಿಶ್ವ ಮಾನ್ಯ ಯತಿಕುಲ ಚಕ್ರವರ್ತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ ಸುಗುಣಶ್ರೀ ಭಜನಾ ಮಂಡಳಿಯ ಗುರು, ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರು ಪೂರ್ಣಿಮೆ ಸಂದರ್ಭದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.
ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು.


ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯದಲ್ಲಿ ಉಷಾ ಹೆಬ್ಬಾರ್ ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡ ಲಕ್ಷಕಂಠ ಗೀತಾ ಪಾರಾಯಣ ಸಂದರ್ಭದಲ್ಲಿ ಅವರು ನೀಡಿದ ವಿಶೇಷ ತರಬೇತಿಯನ್ನು ಪ್ರಶಂಸಿಸಿದರು. ಇತ್ತೀಚೆಗೆ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಕಾರ್ಯಕ್ರಮ ಆಯೋಜಿಸಿದ್ದ ಸುಗುಣಶ್ರೀ ಭಜನಾ ಮಂಡಳಿಯ ಯಶೋದ ಆರ್., ವಿದ್ಯಾ ರಾವ್ ಮತ್ತು ಭಾರತಿ, ಸಹಭಾಗಿತ್ವ ನೀಡಿದ ಯುವ ಬ್ರಾಹ್ಮಣ ಪರಿಷತ್ ಬ್ರಾಹ್ಮೀ ಭಜನಾ ಮಂಡಳಿಯ ಆಶಾ ರಾವ್, ದಿವ್ಯಾ, ಬೆಂಗಳೂರು ದಾಸ ನಮನ ಭಜನಾ ತಂಡದ ರಶ್ಮಿ, ಉಷಾ ಹೆಬ್ಬಾರ್ ಪುತ್ರ ಕೌಶಿಕ್ ವೇದಿಕೆಯಲ್ಲಿದ್ದರು.


ಮಠದ ಕೆ.ವಿ. ರಮಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.