ಲೋಕಬಂಧು ನ್ಯೂಸ್ ಬೆಂಗಳೂರು, ಆ.3
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ ಸೋಮವಾರ 19 ಮಂದಿ ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಆ ಮೂಲಕ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದ್ದು, ಒಟ್ಟು 34 ಸಚಿವರ ಪೂರ್ಣ ಪ್ರಮಾಣದ ಸಂಪುಟ ರಚನೆಯಾದಂತಾಗಿದೆ.
ಸಂಪುಟದಲ್ಲಿ ಬ್ರಾಹ್ಮಣರಿಲ್ಲ
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಯಾವುದೇ ಶಾಸಕರು ಸಚಿವರಾಗಿಲ್ಲ. ಆ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಿದ್ದರು.
ಸಂಪುಟದ ಜಾತಿವಾರು ಪ್ರಾತಿನಿಧ್ಯ
ಡಿ.ಕೆ. ಶಿವಕುಮಾರ್- ಒಕ್ಕಲಿಗ (ಗಂಗಡ್ಕರ್)
ಕೃಷ್ಣ ಬೈರೇಗೌಡ- ಒಕ್ಕಲಿಗ (ಮೊರಸು)
ಎನ್.ಚಲುವರಾಯಸ್ವಾಮಿ- ಒಕ್ಕಲಿಗ (ಗಂಗಡ್ಕರ್)
ಎಚ್.ಸಿ.ಬಾಲಕೃಷ್ಣ- ಒಕ್ಕಲಿಗ (ಗಂಗಡ್ಕರ್)
ಕೆ.ಎಂ. ಶಿವಲಿಂಗೇಗೌಡ- ಒಕ್ಕಲಿಗ (ಗಂಗಡ್ಕರ್)
ರಾಮಲಿಂಗ ರೆಡ್ಡಿ- ಒಕ್ಕಲಿಗ (ರೆಡ್ಡಿ)
ಡಾ.ಜಿ.ಪರಮೇಶ್ವರ- ದಲಿತ (ಬಲಗೈ)
ಪಿ.ಎಂ. ನರೇಂದ್ರಸ್ವಾಮಿ- ದಲಿತ (ಬಲಗೈ)
ಪ್ರಿಯಾಂಕ್ ಖರ್ಗೆ- ದಲಿತ (ಬಲಗೈ)
ಕೆ.ಎಚ್.ಮುನಿಯಪ್ಪ- ದಲಿತ (ಎಡಗೈ)
ಕೆ.ಎಸ್.ಬಸವಂತಪ್ಪ- ದಲಿತ (ಎಡಗೈ)
ರುದ್ರಪ್ಪ ಲಮಾಣಿ- ದಲಿತ (ಲಂಬಾಣಿ)
ಶಿವರಾಜ್ ಎಸ್. ತಂಗಡಗಿ- ಬೋವಿ
ಸತೀಶ್ ಜಾರಕಿಹೊಳಿ- ವಾಲ್ಮೀಕಿ
ಟಿ.ರಘುಮೂರ್ತಿ- ವಾಲ್ಮೀಕಿ
ಬಿ. ನಾಗೇಂದ್ರ- ವಾಲ್ಮೀಕಿ
ಯು.ಟಿ.ಖಾದರ್- (ಮುಸ್ಲಿಂ)
ಬಿ.ಝಡ್.ಜಮೀರ್ ಅಹಮದ್- ಮುಸ್ಲಿಂ
ರಿಜ್ವಾನ್ ಅರ್ಷದ್- ಮುಸ್ಲಿಂ
ಕೆ.ಜೆ ಜಾರ್ಜ್- ಕ್ರಿಶ್ಚಿಯನ್
ಡಾ.ಯತೀಂದ್ರ ಸಿದ್ದರಾಮಯ್ಯ- ಕುರುಬ
ಬಿ.ಸುರೇಶ್ ಭೈರತಿ- ಕುರುಬ
ಪುಟ್ಟರಂಗಶೆಟ್ಟಿ- ಉಪ್ಪಾರ
ಎಸ್. ಮಧು ಬಂಗಾರಪ್ಪ- ಈಡಿಗ
ಸಂತೋಷ ಲಾಡ್- ಹಿಂದುಳಿದ ವರ್ಗ-ಮರಾಠ
ಡಾ.ಅಜಯ್ ಸಿಂಗ್-ರಜಪೂತ್
ಎಂ.ಬಿ.ಪಾಟೀಲ್- ಲಿಂಗಾಯಿತ
ಈಶ್ವರ್ ಖಂಡ್ರೆ- ಲಿಂಗಾಯಿತ (ಬಣಜಿಗ)
ಬಸವರಾಜ್ ರಾಯರೆಡ್ಡಿ- ಲಿಂಗಾಯಿತ (ರೆಡ್ಡಿ)
ವಿಜಯಾನಂದ ಕಾಶಪ್ಪನವರ- ಲಿಂಗಾಯಿತ (ಪಂಚಮಸಾಲಿ)
ಲಕ್ಷ್ಮಣ ಸವದಿ- ಲಿಂಗಾಯಿತ (ಗಾಣಿಗ)
ಡಾ.ಶರಣ ಪ್ರಕಾಶ್ ಪಾಟೀಲ್- ಲಿಂಗಾಯಿತ (ಬಣಜಿಗ)
ಎಸ್ .ಎಸ್. ಮಲ್ಲಿಕಾರ್ಜುನ ಲಿಂಗಾಯತ (ಸಾದರ್)
ಒಟ್ಟು
ಲಿಂಗಾಯತ- 7
ಒಕ್ಕಲಿಗ- 6
ಹಿಂದುಳಿದ ವರ್ಗ- 7
ದಲಿತರು- 10
ಅಲ್ಪಸಂಖ್ಯಾತರು- 4
