ಲೋಕಬಂಧು ನ್ಯೂಸ್ | ಉಡುಪಿ, ಆ.7
ಕಡಿಯಾಳಿಯ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಗಣೇಶೋತ್ಸವ ಅಂಗವಾಗಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಆಗಸ್ಟ್ 9ರಂದು ಬೆಳಿಗ್ಗೆ 10ರಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ನಡೆಯಲಿದೆ.
1ರಿಂದ 4ನೇ ತರಗತಿ, 5ರಿಂದ 7 ಮತ್ತು 8ರಿಂದ 10ನೇ ತರಗತಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳಿವೆ. ಪ್ರಥಮ, ದ್ವಿತೀಯ ಮತ್ತು ತೃತಿಯ ಸ್ಥಾನ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
ಅಂದು ಬೆಳಿಗ್ಗೆ 9.30ರಿಂದ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಲಾಗುವುದು. ಚಿತ್ರ ಬಿಡಿಸುವ ಪೇಪರನ್ನು ಸಮಿತಿ ವತಿಯಿಂದ ನೀಡಲಾಗುವುದು ಎಂದು ಸ್ಪರ್ಧೆ ಮೇಲ್ವಿಚಾರಕ ಸತೀಶ್ ಕುಲಾಲ್ ಕಡಿಯಾಳಿ ಪ್ರಕಟಣೆ ತಿಳಿಸಿದೆ.
