ಲೋಕಬಂಧು ನ್ಯೂಸ್ | ಉಡುಪಿ, ಆ.4
ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಸಂಕಲ್ಪದಂತೆ ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಭಾಗಿತ್ವದಲ್ಲಿ ಶ್ರೀ ಜಯತೀರ್ಥ ಗುರುಗಳ ಆರಾಧನಾ ಮಹೋತ್ಸವ ಇಲ್ಲಿನ ರಥಬೀದಿಯಲ್ಲಿರುವ ಉತ್ತರಾದಿ ಮಠದಲ್ಲಿ ಮಂಗಳವಾರ ವೈಭವದಿಂದ ಸಂಪನ್ನಗೊಂಡಿತು.
ತಿರುಪತಿಯ ದಾಸಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ ಪಗಡಾಲ್ ಮಾರ್ಗದರ್ಶನದಲ್ಲಿ ವಿದ್ವಾಂಸರಿಂದ ಶ್ರೀ ಜಯತೀರ್ಥ ವಿರಚಿತ ಶ್ರೀಮನ್ನ್ಯಾಯಸುಧಾ ಗ್ರಂಥದ ಸಮಗ್ರ ಪಾರಾಯಣ ನಡೆಯಿತು.
ಶ್ರೀಕೃಷ್ಣನ ಸನ್ನಿಧಿಯ ಚಂದ್ರಶಾಲೆಯಲ್ಲಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪಾರಾಯಣಕ್ಕೆ ಚಾಲನೆ ನೀಡಿದರು. ವಿದ್ವಾಂಸರು ಹಾಗೂ ವಿದ್ಯಾರ್ಥಿ ಗಳಿಂದ ಶ್ರೀ ಜಯತೀರ್ಥರ ಕೃತಿಗಳ ಬಗ್ಗೆ ಪ್ರವಚನ ನಡೆಯಿತು.
ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಶ್ರೀ ಜಯತೀರ್ಥರ ಉತ್ಸವ ಮೂರ್ತಿ ಮತ್ತು ಗ್ರಂಥಗಳ ರಥೋತ್ಸವ ನಡೆಸಲಾಯಿತು.
ಉತ್ತರಾದಿ ಮಠದ ವ್ಯವಸ್ಥಾಪಕ ಪ್ರಕಾಶಾಚಾರ್ಯ ಹಾಗೂ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಕರಾವಳಿ ಸಂಚಾಲಕ ಡಾ.ಬಿ.ಗೋಪಾಲಾಚಾರ್ ನಿರ್ವಹಿಸಿದರು.
.jpg)
.jpg)
.jpg)