ಸುಜ್ಞಾನೇಂದ್ರತೀರ್ಥರ ಆರಾಧನೆ

ಲೋಕಬಂಧು ನ್ಯೂಸ್ | ಉಡುಪಿ, ಆ.10
ಪುತ್ತಿಗೆ ಮಠದ 29ನೇ ಯತಿ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಆರಾಧನೆ ಆಷಾಡ ಕೃಷ್ಣ ಪಕ್ಷದ ದ್ವಾದಶಿಯಂದು ಸೋಮವಾರ ನಡೆಯಿತು.
ಆ ಪ್ರಯುಕ್ತ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಸುಜ್ಞಾನೇಂದ್ರತೀರ್ಥ ಶ್ರೀಪಾದರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.


ಬಳಿಕ ಗೋಪೂಜೆ ಮಾಡಿದರು.


ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ವಿದ್ಯಾವಲ್ಲಭ ಎಂಬ ಅಭಿನಾಮದಿಂದ ಖ್ಯಾತರಾದ ನಮ್ಮ ಗುರುಗಳು ಅತ್ಯಂತ ಶ್ರೇಷ್ಠ ಗುರುಗಳಾಗಿದ್ದು, ಅವರ ಅನುಗ್ರಹದಿಂದಲೇ ನಮ್ಮೆಲ್ಲಾ ಯೋಜನೆಗಳು, ಕಾರ್ಯಗಳು ಸಾಂಗವಾಗಿ ನಡೆಯುತ್ತಿದೆ ಎಂದು ಭಾವಿಸುತ್ತೇವೆ. ಆ ಕಾರಣದಿಂದಾಗಿ ಸುಜ್ಞಾನ ಟ್ರಸ್ಟ್ ಮೂಲಕ ಯೋಜನೆಗಳನ್ನು ದೇಶ- ವಿದೇಶಗಳಲ್ಲಿ ನಡೆಸಲಾಗುತ್ತಿದೆ. ಆ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.


ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ಮೊದಲಾದವರಿದ್ದರು.