ಕುತ್ತಿಗೆ ನೋವಿಗೆ ಆಯುರ್ವೇದ ಚಿಕಿತ್ಸೆ

ಲೋಕಬಂಧು ನ್ಯೂಸ್ | ಮಣಿಪಾಲ, ಆ.9
ಕುತ್ತಿಗೆನೋವು, ಕುತ್ತಿಗೆಯ ಬಿಗಿತ ಹಾಗೂ ಕುತ್ತಿಗೆಯ ಚಲನೆಗೆ ತೊಂದರೆ ಅನುಭವಿಸುತ್ತಿರುವವರಿಗಾಗಿ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ ವತಿಯಿಂದ ಆಗಸ್ಟ್ 10ರಿಂದ 15ರ ವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಇಲ್ಲಿನ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ ಮತು ಸಂಶೋಧನ ಸಂಸ್ಥೆಯಲ್ಲಿ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಕುತ್ತಿಗೆ ನೋವು ಹಾಗೂ ಸ್ಪಾಂಡಿಲೋಸಿಸ್ ಸಮಸ್ಯೆಗಳಿಗೆ ವಿಶೇಷ ಆಯುರ್ವೇದ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುವುದು.


ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 81234 03233ನ್ನು ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.