ಲೋಕಬಂಧು ನ್ಯೂಸ್ | ಪಡುಬಿದ್ರಿ, ಆ.9
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಗಸ್ಟ್ 10ರಂದು ವಿಶೇಷ ತುಪ್ಪದ ಅಪ್ಪ ಸೇವೆ ನಡೆಯಲಿದೆ.
ಶ್ರೀಕ್ಷೇತ್ರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀಮಹಾಲಕ್ಷ್ಮೀ ಅಮ್ಮನವರಿಗೆ ಅತ್ಯಂತ ಪ್ರಿಯವಾದ ವಿಶೇಷ ತುಪ್ಪದ ಅಪ್ಪ ಸೇವೆ ಅಪರಾಹ್ನ 3.30ರಿಂದ ನೆರವೇರಿಸಲಾಗುವುದುಎಂದು ಕ್ಷೇತ್ರಾಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
