ಲೋಕಬಂಧು ನ್ಯೂಸ್ | ಮಣಿಪಾಲ, ಆ.7
ಇಲ್ಲಿನ ಈಶ್ವರ ನಗರದ ರಾಷ್ಟ್ರೀಯ ಹೆದ್ದಾರಿ 169ಎ ಇಳಿಜಾರಿನಲ್ಲಿ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನಗರಸಭೆಯ ಕುಡಿಯುವ ನೀರಿನ ಪಂಪ್ ಹೌಸಿನ ಎದುರು ಪಲ್ಟಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಮುಖ್ಯ ರಸ್ತೆಯಲ್ಲಿ ಏಕಾಏಕಿ ತಿರುವು ಇರುದರಿಂದ ರಿಕ್ಷಾ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
ಪದೇ ಪದೇ ಈ ಭಾಗದಲ್ಲಿ ಅಪಘಾತವಾಗಲು ತಿರುವು ಮುರುವು ರಸ್ತೆಯೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇಳಿಜಾರು ಪ್ರದೇಶವಾಗಿರುವುದರಿಂದ ಸೂಚನಾ ಫಲಕವೂ ಉಪಯೋಗಕ್ಕೆ ಬರುತ್ತಿಲ್ಲ. ಒಮ್ಮೆಲೇ ತಿರುವು ಇರುವುದರಿಂದ ಹೆಚ್ಚಿನ ವಾಹನ ಚಾಲಕರು ಇಲ್ಲಿ ದಿಕ್ಕುತಪ್ಪುತ್ತಿದ್ದಾರೆ.
ಮಣಿಪಾಲ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
