ಸಸ್ಯ ಶಾಸ್ತ್ರಜ್ಞ ಕರ್ಜೆ ಮಂಜುನಾಥ ಗೋಳಿ ನಿಧನ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಆ.8
ಚೇರ್ಕಾಡಿ ಕರ್ಜೆಯ ಹಿರಿಯ ಸಸ್ಯ ಶಾಸ್ತ್ರಜ್ಞ ಮಂಜುನಾಥ ಗೋಳಿ (75) ಶುಕ್ರವಾರ ನಿಧನರಾದರು.
ಸಾವಿರಾರು ಔಷಧೀಯ ಸಸ್ಯಗಳ ವೈಜ್ಞಾನಿಕ ಮಹತ್ತ್ವವನ್ನು ಅರಿತಿದ್ದ ಅವರು ಸಹಸ್ರಾರು ಸಸ್ಯಗಳ ಕನ್ನಡ, ಆಂಗ್ಲ ಮತ್ತು ಸಂಸ್ಕೃತ ಹೆಸರು ಬಲ್ಲವರಾಗಿದ್ದರು. ಆಯುರ್ವೇದ ವೈದ್ಯ ಹಾಗೂ ಪ್ರಾಧ್ಯಾಪಕರಾಗಿದ್ದ ಗೋಳಿ ಅವರು ಸಾವಿರಾರು ಔಷಧೀಯ ಸಸ್ಯಗಳನ್ನು ಬೆಳೆಸಿದ್ದರು.


ಪಿಎಚ್.ಡಿ ಮಾಡುತ್ತಿದ್ದ ಹಲವರು ಅವರಿಂದ ಮಾರ್ಗದರ್ಶನ ಪಡೆದಿದ್ದರು. ಇಸ್ರೋ ಸಹಿತ ಹಲವು ಸಂಸ್ಥೆಗಳಿಗೆ ಔಷಧೀಯ ವನ ನಿರ್ಮಿಸಲು ಮಾರ್ಗದರ್ಶನ ನೀಡಿದ್ದರು.


ಪ್ರಗತಿಪರ ಕೃಷಿಕರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


ಕಲಾಪ್ರೇಮಿಯಾಗಿದ್ದ ಅವರು ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.


ಪೇಜಾವರ ಶ್ರೀ ಸಂತಾಪ
ಮಂಜುನಾಥ ಗೋಳಿ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.