ಮಂತ್ರಾಲಯ ಸುಬುಧೇಂದ್ರತೀರ್ಥರಿಂದ ಚಾತುರ್ಮಾಸ್ಯ ವ್ರತದೀಕ್ಷೆ

ಲೋಕಬಂಧು ನ್ಯೂಸ್ | ರಾಯಚೂರು, ಆ.11
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಸೋಮವಾರ ಶ್ರೀಮಠದಲ್ಲಿ 14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಭಕ್ತಿಪೂರ್ವಕವಾಗಿ ಆರಂಭಿಸಿದರು.
ಈ ಸಂದರ್ಭದಲ್ಲಿ ಶ್ರೀಸ್ವಾಮೀಜಿಯವರು ಸಾಂಪ್ರದಾಯಿಕ ಚಾತುರ್ಮಾಸ್ಯ ದೀಕ್ಷೆಯ ವಿಧಿ-ವಿಧಾನಗಳನ್ನು ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳು, ಶ್ರೀ ವಾದೀಂದ್ರತೀರ್ಥರು ಹಾಗೂ ಮಠದಲ್ಲಿರುವ ಎಲ್ಲಾ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಾತುರ್ಮಾಸ್ಯ ಅವಧಿಯಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನೆರೆದ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶದಲ್ಲಿ ತಿಳಿಸಿದರು.