ಲೋಕಬಂಧು ನ್ಯೂಸ್ ಉಡುಪಿ,ಆ.4
ನಗರದ ಬನ್ನಂಜೆ ನಾರಾಯಣ ಗುರು ಮಂದಿರ ಸನಿಹದಲ್ಲಿ ಹೆದ್ದಾರಿಯಲ್ಲಿ ಕಾಂಕ್ರೀಟ್ ಬಿರುಕುಬಿಟ್ಟಿದ್ದು ದೊಡ್ಡ ಗುಂಡಿಯಾಗಿ ಮಾರ್ಪಟ್ಟಿದೆ.ಕಾಂಕ್ರೀಟ್ ಒಳಗಿನ ಕಬ್ಬಿಣದ ಕಂಬಿಗಳು ಮೇಲೆದ್ದಿವೆ. ವಾಹನ ದಟ್ಟಣೆಯ ಹೆದ್ದಾರಿ ಇದಾಗಿರುವುದರಿಂದ ಗಂಭೀರ ಸಮಸ್ಯೆ ಉದ್ಭವವಾಗಿ, ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಈ ಮೃತ್ಯು ಕೂಪದ ಬಳಿ ಅಪಘಾತಗಳು ಸಂಭವಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಉದ್ಭವಿಸಿರುವ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಜಿಲ್ಲಾಡಳಿತ ತುರ್ತಾಗಿ ದುರಸ್ತಿಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.