ಔಷಧೀಯ ಸಸ್ಯಗಳ ವಿತರಣೆ

ಲೋಕಬಂಧು ನ್ಯೂಸ್ | ಮಣಿಪಾಲ ಆ.10
ಇಲ್ಲಿನ ಮುುನಿಯಾಲು ಆಯುರ್ವೇದ ವತಿಯಿಂದ ಗುರು ಪೂರ್ಣಿಮೆ ಮತ್ತು ವನಮಹೋತ್ಸವ ಅಂಗವಾಗಿ ಸಾರ್ವಜನಿಕರಿಗೆ ಸುಮಾರು 3 ಸಾವಿರ ವಿವಿಧ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು.
ಮುನಿಯಾಲು ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ. ಸಸಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಗೆ ಔಷಧೀಯ ಸಸಿಗಳನ್ನು ಪರಿಚಯಿಸುವ ಜೊತೆಗೆ ಅವುಗಳ ಕೃಷಿಯನ್ನು ಉತ್ತೇಜಿಸುವುದು ಆ ಮೂಲಕ ಪರಿಸರ ಜಾಗೃತಿ ಮೂಡಿಸುವುದು ಮತ್ತು ಜೀವ ವೈವಿಧ್ಯ ರಕ್ಷಣೆ ಕಾರ್ಯಕ್ರಮದ ಆಶಯ ಎಂದರು.


ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ ಭಟ್, ಆಡಳಿತಾಧಿಕಾರಿ ಯೋಗೀಶ ಶೆಟ್ಟಿ ಮೊದಲಾದವರಿದ್ದರು.


ಬೇವು, ಅಶೋಕ, ಪುನರ್ಪುಳಿ (ಬಿರಿಂಡ), ನೆಲ್ಲಿ, ನೇರಳೆ, ಹಿಪ್ಪುನೇರಳೆ, ಮಾವು, ಶ್ರೀಗಂಧ, ರಕ್ತಚಂದನ, ವಾಟೆಹುಳಿ, ಜಾರಿಗೆಹುಳಿ ಸೇರಿದಂತೆ ವಿವಿಧ ಔಷಧೀಯ ಸಸ್ಯಗಳನ್ನು ಸುಮಾರು 300 ಮಂದಿಗೆ ವಿತರಿಸಲಾಯಿತು.