ಲೋಕಬಂಧು ನ್ಯೂಸ್ | ಉಡುಪಿ, ಆ.29
ಕಡಿಯಾಳಿ ಮಾತೃ ಮಂಡಳಿ ವತಿಯಿಂದ 42ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪಾಡಿಗಾರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಆ.21ರಂದು ಶುಕ್ರವಾರ ಶ್ರೀ ಮಹಿಷಮರ್ದಿನಿ ದೇವಳದವಕಾತ್ಯಾಯನಿ ಮಂಟಪದಲ್ಲಿ ನಡೆಯಿತು.
ಶ್ರೀದೇವಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠಾಪನೆ ನಡೆದು ಸಾಮೂಹಿಕ ಕುಂಕುಮಾರ್ಚನೆ, ಪೂಜೆ, ಮಹಾಮಂಗಳಾರತಿ, ದೋರಗ್ರಂಥಿ ಬಂಧನ ಸಹಿತ ಪ್ರಸಾದ ವಿತರಣೆ ನಡೆಯಿತು.
ವಕೀಲ ಸುಪ್ರಸಾದ ಶೆಟ್ಟಿ, ಶೋಭಾ ಭಂಡಾರ್ಕರ್, ಡಾ. ಉಷಾ ಹೆಬ್ಬಾರ್, ಮಾತೃ ಮಂಡಳಿ ಸಂಸ್ಥಾಪಕಿ ಸುಪ್ರಭಾ ಆಚಾರ್ಯ, ಅಧ್ಯಕ್ಷೆ ಪದ್ಮಾ ರತ್ನಾಕರ್, ಭಾರತಿ ಇಂದುಶೇಖರ್ ಮೊದಲಾದವರಿದ್ದರು.
ಸುಮಾರು 500ಕ್ಕೂ ಅಧಿಕ ಮಂದಿ ಸುಮಂಗಳೆಯರು ಪೂಜೆಯಲ್ಲಿ ಭಾಗವಹಿಸಿದರು.