ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿಗೆ ಆ.31 ಕೊನೆಯ ದಿನ

ಲೋಕಬಂಧು ನ್ಯೂಸ್ ಮಣಿಪಾಲ, ಆ.24
2026ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿಗೆ ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಾರ್ವಜನಿಕರನ್ನು ವಿನಂತಿಸಿದೆ.ಕಳೆದ 26 ವರ್ಷಗಳಿಂದ ಸೇವೆ ಚಾಲ್ತಿಯಲ್ಲಿರುವ ಆರೋಗ್ಯ ಕಾರ್ಡ್ ಯೋಜನೆಯಡಿ ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಪ್ರಯೋಜನ ಪಡೆಯುತ್ತಿದ್ದಾರೆ. 'ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ' ಎಂಬ ಘೋಷವಾಕ್ಯದಡಿ ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವ್ಯಾಪಕ ಆರೋಗ್ಯ ಪ್ರಯೋಜನಗಳನ್ನು ಈ ಕಾರ್ಡ್ ನೀಡುತ್ತದೆ. ನೋಂದಣಿ ನಂತರದ ತಿಂಗಳಿನ 15ನೇ ದಿನಾಂಕದಿಂದ ಪ್ರಯೋಜನಗಳು ಜಾರಿಗೆ ಬಂದು 2027ರ ಆಗಸ್ಟ್ 15ರ ವರೆಗೆ ಮಾನ್ಯವಾಗಿರುತ್ತದೆ.

ಕಾರ್ಡಿನ ವಿಧಗಳು
ವೈಯಕ್ತಿಕ ಸದಸ್ಯತ್ವ- ವರ್ಷಕ್ಕೆ ರೂ.350
ಕೌಟಂಬಿಕ ಸದಸ್ಯತ್ವ- ವರ್ಷಕ್ಕೆ ರೂ.700
ಕೌಟಂಬಿಕ ಪ್ಲಸ್ ಸದಸ್ಯತ್ವ- ವರ್ಷಕ್ಕೆ ರೂ. 900

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ತಜ್ಞ ಸಮಾಲೋಚನೆ ಶುಲ್ಕಗಳಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.25, ರೇಡಿಯಾಲಜಿ ಸೇವೆಗಳಲ್ಲಿ ಶೇ.20 ಸೇರಿದಂತೆ ಹಲವು ರಿಯಾಯಿತಿಗಳು ಲಭ್ಯ.


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು, ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಹಾಗೂ ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಕಾರ್ಡ್ ಪ್ರಯೋಜನಗಳು ಲಭ್ಯ.


ಹೆಚ್ಚಿನ ವಿವರಗಳಿಗಾಗಿ www.manipalhealthcard.comಗೆ ಭೇಟಿ ನೀಡಿ ಅಥವಾ 99808 54700 / 0820-2923748 ಸಂಪರ್ಕಿಸಬಹುದು. ಕಾರ್ಡ್ ಸ್ಥಿತಿ ಪರಿಶೀಲನೆಗೆ 88675 79797ಗೆ ಮಿಸ್ಡ್ ಕಾಲ್ ನೀಡಬಹುದು. ನೋಂದಣಿಗೆ ನಿಮ್ಮ ಸ್ಥಳೀಯ ಮಣಿಪಾಲ ಆರೋಗ್ಯ ಕಾರ್ಡ್ ಪ್ರತಿನಿಧಿಗಳನ್ನೂ ಸಂಪರ್ಕಿಸಬಹುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.